Surprise Me!

News Cafe | Idgah Maidan Issue: Chamarajapete Bandh On July 12 | HR Ranganath | July 4, 2022

2022-07-04 15 Dailymotion

ಈದ್ಗಾ ಮೈದಾನದ ವಿವಾದ ತೀವ್ರಗೊಂಡಿದೆ. ಚಾಮರಾಜಪೇಟೆ ಆಟದ ಮೈದಾನ ಮುಸ್ಲಿಮರಿಗೆ ಸೇರಿಲ್ಲ. ಇದು ನಮ್ಮ ಸ್ವತ್ತು ಅಂತ ಸ್ಥಳೀಯರು, ಸಂಘಟನೆಗಳು ಕಿಡಿಕಾರಿವೆ. ಚಾಮರಾಜಪೇಟೆ ಆಟದ ಮೈದಾನ ಉಳಿವಿಗಾಗಿ ಇದೇ 12ಕ್ಕೆ ಅಂದರೆ ಮುಂದಿನ ಮಂಗಳವಾರ ಚಾಮರಾಜಪೇಟೆ ಬಂದ್‍ಗೆ ಕರೆ ಕೊಟ್ಟಿವೆ. ಬೆಳಗ್ಗೆ 6ರಿಂದ ಸಂಜೆ 6ಗಂಟೆಯ ತನಕ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಸಂಪೂರ್ಣ ಸ್ಥಬ್ದಗೊಳ್ಳಲಿದೆ. ಆದರೆ, ಇದಕ್ಕೆ ಸೊಪ್ಪು ಹಾಕದ ಮುಸ್ಲಿಂ ವ್ಯಾಪಾರಿಗಳು, ಬಂದ್‍ಗೆ ನಮ್ಮ ಬೆಂಬಲವಿಲ್ಲ. ನಮ್ಮ ಅಂಗಡಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚಲ್ಲ. ಎಂದಿನಂತೆ ವ್ಯಾಪಾರ ಮಾಡ್ತೇವೆ. ಬಂದ್‍ನಿಂದ ಲಾಸ್ ಆದ್ರೆ ಇವ್ರೇನು ತಂದು ಕೊಡ್ತಾರಾ ಅಂತ ಪ್ರಶ್ನೆ ಮಾಡಿದ್ದಾರೆ. ಬಿಬಿಎಂಪಿ ಕಮಿಷನರ್ ಇದು ಪಾಲಿಕೆಯ ಸ್ವತ್ತಲ್ಲ ಎಂದಿದ್ರು. ವಕ್ಫ್‍ಬೋರ್ಡ್ ಇದು ನಮ್ಮ ಜಾಗ ಎಂದು ವಾದ ಮಾಡಿತ್ತು. ಹೀಗೆ ಗೊಂದಲದಲ್ಲಿದ್ದ, ಕ್ಷೇತ್ರದ ಜನ, ನಿನ್ನೆ ಈದ್ಗಾ ಮೈದಾನ ಸಮೀಪದ ಜಂಗಮ ಮಂಟಪದಲ್ಲಿ ಸಭೆ ನಡೆಸಿ, ಬಂದ್‍ಗೆ ತೀರ್ಮಾನಿಸಿದ್ದಾರೆ. ಬಂದ್ ದಿನ ಸಿರ್ಸಿ ಸರ್ಕಲ್ ನಿಂದ ಈದ್ಗಾ ಮೈದಾನದವರೆಗೆ ಬೃಹತ್ ರ್ಯಾಲಿ ಮಾಡಲಿದ್ದಾರೆ. ಆದರೆ, ಇದಕ್ಕೆ ಪೊಲೀಸರು ಅವಕಾಶ ಕೊಡೋದು ಅನುಮಾನ.

#publictv #newscafe #hrranganath